ಬೆಳ್ತಂಗಡಿ : ನಾಲ್ಕು ವರುಷಗಳ ಹಿಂದೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ರಿಯಾಜ್, ಮುಂಡಾಜೆ ನವಾಜ್, ಬೆಂಗಳೂರು ನಿವಾಸಿ ಕೃಷ್ಣ ಬಂಧಿತರು.

26.06.2020 ರಂದು ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿನ ನಿವಾಸಿ ಅಚ್ಯುತ್ ಭಟ್ ಎಂಬವರ ಮನೆಯಲ್ಲಿ, ಅಂದಾಜು 30 ರಿಂದ 35 ಪವನ್ ತೂಕದ ಚಿನ್ನದ ಒಡವೆಗಳು, ಸುಮಾರು 1 ಕೆ ಜಿ ತೂಕದ ಬೆಳ್ಳಿ ಒಡವೆಗಳು ಹಾಗೂ ರೂ 25,000/- ನಗದು ಹಣದ (ಅಂದಾಜು ಮೌಲ್ಯ ರೂ 12,40,000/- ) ದರೋಡೆ ಪ್ರಕರಣಕ್ಕೆ ಸಂಬಂಧಿಸಿ, ಧಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ:43/2020 ಕಲಂ:448, 427, 506, 394 R/W 34 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಸದ್ರಿ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ, ಆರೋಪಿಗಳು ಮತ್ತು ಕಳವಾದ ಸೊತ್ತುಗಳು ಸುಳಿವು ಪತ್ತೆಯಾಗದಿರುವುದರಿಂದ ಮಾನ್ಯ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ‘ಸಿ’ ಅಂತಿಮ ವರದಿ (ಆರೋಪಿ ಹಾಗೂ ಸೊತ್ತು ಪತ್ತೆಯಾಗದ ಪ್ರಕರಣವೆಂದು) ವರದಿ ಸಲ್ಲಿಸಲಾಗಿರುತ್ತದೆ.
ಮೇ.22 ರಂದು ಸದ್ರಿ ಪ್ರಕರಣದ ಆರೋಪಿಯ ಹಾಗೂ ಸೊತ್ತುಗಳ ಬಗ್ಗೆ ಸುಳಿವು ದೊರೆತ ಮೇರೆಗೆ, ತಕ್ಷಣ ಪ್ರವೃತ್ತರಾದ ತನಿಖಾ ತಂಡವು, ಆರೋಪಿಗಳ ಪೈಕಿ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆಯಲ್ಲಿ ಆರೋಪಿ ನೀಡಿದ ಮಾಹಿತಿಯ ಮೇರೆಗೆ, ಬೆಳ್ತಂಗಡಿ, ಮುಂಡಾಜೆ ಗ್ರಾಮದ ನವಾಝ್, ಹಾಗೂ ಬೆಂಗಳೂರು ನಿವಾಸಿ ಕೃಷ್ಣ ಎಂಬವರನ್ನು ಬಂಧಿಸಲಾಗಿದ್ದು, ಸದ್ರಿ ಮೂವರು ಆರೋಪಿಗಳೊಂದಿಗೆ ಇನ್ನೂ ಇಬ್ಬರು ಭಾಗಿಯಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಬಂಧಿತ ಆರೋಪಿಗಳಿಂದ ಒಟ್ಟು 104 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಮೌಲ್ಯ ರೂ 7,87,000/-), 288 ಗ್ರಾಂ ಬೆಳ್ಳಿ (ಅಂದಾಜು ಮೌಲ್ಯ ರೂ 30,240 ರೂ/-), ಅಂದಾಜು ರೂ 25,000/- ಮೌಲ್ಯದ ಮೋಟರ ಬೈಕ್ -1 ಸೇರಿದಂತೆ ರೂ 8,42,240/- ಮೌಲ್ಯದ ಸೊತ್ತುಗಳನ್ನು ಸ್ವಾದೀನಪಡಿಸಲಾಗಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಈ ಪ್ರಕರಣದ ಪತ್ತೆಯಲ್ಲಿ, ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಸಿ.ಬಿ. ರಿಷ್ಯಂತ್ ಐ.ಪಿ.ಎಸ್ ರವರು, ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕರುಗಳಾದ ಎಂ ಜಗದೀಶ್ ಮತ್ತು ರಾಜೇಂದ್ರ ಡಿ ಎಸ್ ಮತ್ತು ಬಂಟ್ವಾಳ ಪೋಲಿಸ್ ಉಪಾಧೀಕ್ಷಕರು ವಿಜಯ ಪ್ರಸಾದ್ ಎಸ್ ರವರುಗಳ ನಿರ್ದೆಶನದಲ್ಲಿ, ವಸಂತ್ ಆರ್ ಆಚಾರ್ ಪೋಲಿಸ್ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ, ನಾಗರಾಜ್ ಹೆಚ್.ಇ, ಪೊಲೀಸ್ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ, ಮತ್ತು ಸುಬ್ಬಾಪುರ ಮಠ್, ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆರವರ ಮಾರ್ಗದರ್ಶದಲ್ಲಿ, ಧರ್ಮಸ್ಥಳ ಪೋಲಿಸ್ ಠಾಣಾ ಪೋಲಿಸ್ ಉಪ-ನಿರೀಕ್ಷಕರುಗಳಾದ ಅನೀಲ್ ಕುಮಾರ ಡಿ, ಸಮರ್ಥ ರ ಗಾಣಿಗೇರ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ರಾಜೇಶ ಎನ್ , ಹೆಚ್.ಸಿ ಪ್ರಶಾಂತ್ ಎಂ , ಹೆಚ್.ಸಿ ಸತೀಶ್ ನಾಯ್ಕ್ , ಮ.ಹೆಚ್.ಸಿ ಪ್ರಮೋದಿನಿ , ಹೆಚ್.ಸಿ ಶೇಖರ್ ಗೌಡ , ಹೆಚ್ಸಿ ಕೃಷ್ಣಪ್ಪ, ಆನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ , ಗೋವಿಂದರಾಜ್, ಭಿಮೇಶ್, ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ರವರುಗಳು ಕರ್ತವ್ಯ ನಿರ್ವಹಿಸಿರುತ್ತಾರೆ.
























