ಬೆಂಗಳೂರು : ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023ಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಶೇ.48.50 ರಷ್ಟಿದೆ. ದರ ಹೆಚ್ಚಳದಿಂದಾಗಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆಯಿದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಸಚಿವರು, ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಹೆಸರು 805 ರೂ, ಉದ್ದು 660, ತೊಗರಿ 776, ಸೋಯಾಬಿನ್ 1,431 ರೂ. ಇದ್ದು, ಕಳೆದ ಬಾರಿಗಿಂತ ಈ ಬಾರಿ 20-30 ಪರ್ಸೆಂಟ್ ದರ ಹೆಚ್ಚಳ ಮಾಡಲಾಗಿದೆ.
ಕಳೆದ ವರ್ಷ 5 ಕೆಜಿಯ ಬಿತ್ತನೆ ರಾಗಿಯ ಬೆಲೆ ಸಾಮಾನ್ಯ ವರ್ಗದ ರೈತರಿಗೆ 190 ರೂ. ಇದೆ. ಈ ವರ್ಷ 235 ರೂ. ಆಗಿದ್ದು, 45 ರೂ. ಹೆಚ್ಚಳ ಕಂಡಿದೆ. ಎಸ್ಸಿ, ಎಸ್ಟಿ ರೈತರಿಗೆ ಕಳೆದ ವರ್ಷ 145 ರೂ. ಇದ್ದು, ಈ ವರ್ಷ 190 ರೂ. ಆಗಿದೆ. 5 ಕೆಜಿಯ ಬ್ಯಾಗ್ ತೊಗರಿ 565 ರೂ. ಇದ್ದದ್ದು, ಈ ವರ್ಷ 765 ರೂ. ಆಗಿದೆ. ನೆಲಗಡಲೆಯ 30 ಕೆಜಿ ಬ್ಯಾಗ್ ಕಳೆದ ವರ್ಷ 3,000 ರೂ. ಇದ್ದದ್ದು, ಈ ವರ್ಷ 3,420 ರೂ. ಆಗಿದೆ. ಮೆಕ್ಕೆಜೋಳವೂ ಸಹ ಕಳೆದ ವರ್ಷ 909 ರೂ. ಇದ್ದದ್ದು, ಈ ವರ್ಷ 996 ರೂ. ಆಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.