Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ: ಬೆಳ್ತಂಗಡಿಯ ಯುವತಿ ಬಂಧನ..!!

    ಪುತ್ತೂರು : ರಿಕ್ಷಾ – ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ..!!

    ಪುತ್ತೂರು : ರಿಕ್ಷಾ – ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ..!!

    (ಮಾ.20) : ಪುತ್ತೂರಿನಲ್ಲಿ ‘ಶಾಸ್ತಾ ಕನ್ಸಲ್ಟೆನ್ಸಿ’ ಉದ್ಘಾಟನೆ..!!

    (ಮಾ.20) : ಪುತ್ತೂರಿನಲ್ಲಿ ‘ಶಾಸ್ತಾ ಕನ್ಸಲ್ಟೆನ್ಸಿ’ ಉದ್ಘಾಟನೆ..!!

    ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸ್ಟೇಜ್ ತೆರವು..!!

    ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸ್ಟೇಜ್ ತೆರವು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಅನ್ಯಧರ್ಮದ ವಿದ್ಯಾರ್ಥಿಗಳ ಜೊತೆ ಜಾತ್ರೆಗೆ ಬಂದಿದ್ದಕ್ಕೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ: ಪ್ರಕರಣ ದಾಖಲು..!

    ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

    ಕಡಬ: ತಲೆನೋವಿಗೆ ಔಷಧಿ ಸೇವಿಸಿದ 10 ವರ್ಷದ ಬಾಲಕ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಸಹೋದರನನ್ನು ಮದ್ವೆಯಾಗಿದ್ದಕ್ಕೆ ಮೂವರ ಹತ್ಯೆ : ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಕುಟುಂಬವೇ ಬಲಿ

May 29, 2024
in ರಾಜ್ಯ, ರಾಷ್ಟ್ರೀಯ
0
ಸಹೋದರನನ್ನು ಮದ್ವೆಯಾಗಿದ್ದಕ್ಕೆ ಮೂವರ ಹತ್ಯೆ : ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಕುಟುಂಬವೇ ಬಲಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಕೊಪ್ಪಳ : ತಾಲೂಕಿನ ಹೊಸಲಿಂಗಾಪುರ ಗ್ರಾಮದ ಒಂದೇ ಮನೆಯಲ್ಲಿ ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದರು. ಶವ ನೋಡಿದವರು ಆತ್ಮಹತ್ಯೆ ಅಂತಲೇ ಹೇಳಿದ್ದರು. ಮೇಲ್ನೋಟಕ್ಕೆ ಮೂವರ ಸಾವು ಕೂಡಾ ಆತ್ಮಹತ್ಯೆ ರೀತಿಯೇ ಇತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ.

Advertisement
Advertisement
Advertisement

ಮೂವರದ್ದು ಆತ್ಮಹತ್ಯೆಯಲ್ಲ ಬದಲಾಗಿ ಕೊಲೆ ಮಾಡಿರುವುದು ಖಚಿತವಾಗಿದ್ದು, ತನಿಖೆ ವೇಳೆ ಇಡೀ ಪೊಲೀಸರೇ ಬೆಚ್ಚಿಬೀಳುವಂತಹ ‌ವಿಚಾರ ಪತ್ತೆಯಾಗಿದೆ.

ತನ್ನನ್ನು ಬಿಟ್ಟು ತನ್ನ ಸಹೋದರನನ್ನು ಮದುವೆಯಾಗಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೋರ್ವ ಮೂವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಇಪ್ಪತ್ನಾಲ್ಕು ಗಂಟೆಯಲ್ಲೇ ಪೊಲೀಸರು ಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದರು. ಹೊಸ ಲಿಂಗಾಪುರ ಗ್ರಾಮದ ನಿವಾಸಿಗಳಾದ ಐವತ್ತು ವರ್ಷದ ರಾಜೇಶ್ವರಿ, ರಾಜೇಶ್ವರಿ ಪುತ್ರಿಯಾಗಿರುವ ಇಪ್ಪತ್ತೆಂಟು ವರ್ಷದ ವಸಂತಾ, ಮತ್ತು ವಸಂತಾಳ ಐದು ವರ್ಷದ ಮಗ ಸಾಯಿಧರ್ಮತೇಜ್, ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ನಿಗೂಢವಾಗಿ ಮೃತಪಟ್ಟ ಮೂವರ ಶವ ನೋಡಿ ಇಡೀ ಗ್ರಾಮಕ್ಕೆ ಗ್ರಾಮದ ಜನರೇ ಬೆಚ್ಚಿಬಿದಿದ್ದರು. ಮೇ.27 ರಂದು ಮುಂಜಾನೆಯಿಂದ ಸಂಜೆವರೆಗೆ ಕಂಡಿದ್ದ ಮೂವರು ಕೂಡಾ, ಸಂಜೆ ನಂತರ ಹೊರಗೆ ಕಂಡಿರಲಿಲ್ಲಾ. ಆದ್ರೆ ಮೇ.28 ರಂದು ಮುಂಜಾನೆ ಮನೆ ಬಾಗಿಲು ತೆಗೆದು ನೋಡಿದಾಗ, ಅಡುಗೆ ಮನೆಯಲ್ಲಿ ವಸಂತಾಳ ಶವ ಸಿಕ್ಕರೆ, ಮನೆಯ ಬೆಡ್ ರೂಮ್ ನಲ್ಲಿ ರಾಜೇಶ್ವರಿ ಮತ್ತು ರಾಜೇಶ್ವರಿ ಮೊಮ್ಮಗ ಸಾಯಿಧರ್ಮತೇಜ್ ಶವ ಇತ್ತು. ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಲೇ ಎಲ್ಲರು ಅಂದುಕೊಂಡಿದ್ದರು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಮೂವರ ಶವಗಳನ್ನು ನೋಡಿದಾಗ ಆರಂಭದಲ್ಲಿಯೇ ಪೊಲೀಸರು ಕೂಡಾ ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ ಆತ್ಮಹತ್ಯೆ ಯಾಕೆ ಮಾಡಿಕೊಂಡರು, ಆತ್ಮಹತ್ಯೆ ಹೇಗೆ ಮಾಡಿಕೊಂಡರು ಎಂದು ಸುದೀರ್ಘವಾಗಿ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಆತ್ಮಹತ್ಯೆಗೆ ಕಾರಣವಾಗಿದ್ದ ಯಾವುದೇ ಸಂಗತಿ ಕೂಡಾ ಪತ್ತೆಯಾಗಿರಲಿಲ್ಲ. ಹೀಗಾಗಿ ತನಿಖೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನಡೆಸಿದಾಗ, ಸ್ವತ ಪೊಲೀಸರೇ ಬೆಚ್ಚಿಬಿದ್ದಾರೆ. ಯಾಕಂದ್ರೆ ಮೂವರದ್ದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎನ್ನುವುದು ಗೊತ್ತಾಗಿದೆ.

ಪೊಲೀಸರ ತನಿಖೆಯಲ್ಲಿ ಮೂವರು ಕೂಡಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಮೂವರನ್ನು ಕೂಡಾ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ತಿಳಿದುಬಂದಿದೆ. ಹಾಗಾದ್ರೆ ಕೊಲೆ ಮಾಡಿದವರು ಯಾರು ಎಂದು ಪತ್ತೆ ಹಚ್ಚಲು ಮುಂದಾದ ಸಮಯ ಮತ್ತೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಕೊಲೆ ಮಾಡಿದವರು, ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್​ನ ಸಹೋದರ ಆಸೀಫ್​.

ಹೊಸಪೇಟೆ ನಿವಾಸಿಯಾಗಿರುವ 28 ವರ್ಷದ ಆಸೀಫ್ ಮೂವರನ್ನು ಕೊಲೆ ಮಾಡಿದ್ದಾನೆ.

ಕೊಲೆಯಾಗಿರುವ ವಸಂತಾಳಿಗೆ ಮೊದಲು ಆಂಧ್ರ ಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ದಂಪತಿಗೆ ಸಾಯಿಧರ್ಮತೇಜ್ ಅನ್ನೋ ಪುತ್ರ ಕೂಡಾ ಇದ್ದ. ಆದ್ರೆ ಕೌಟುಂಬಿಕ ಕಲಹದಿಂದ ವಸಂತಾ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇನ್ನು ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಅದೇ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್​(ಕೊಲೆ ಆರೋಪಿ) ಎನ್ನುವಾತನ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಆರೀಫ್​ ಮತ್ತು ವಸಂತಾ ಆರು ತಿಂಗಳ ಹಿಂದೆ ಮದುವೆಯಾಗಿದ್ದರಂತೆ. ಮದುವೆ ನಂತರ ಆರೀಫ್​​ ಆಗಾಗ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುತ್ತಿದ್ದ. ಇನ್ನು ಆರೀಫ್​ಗೆ ಕೂಡಾ ಮೊದಲ ಪತ್ನಿಯಿದ್ದು, ದಂಪತಿಗೆ ಮಕ್ಕಳು ಕೂಡಾ ಇದ್ದಾರೆ. ಆದ್ರೆ ಯಾವಾಗ ಆರೀಫ್​, ವಸಂತಾಳನ್ನು ಮದುವೆಯಾದನೋ ಆಗ, ಆಸೀಫ್​ ಕ್ರೋಧಗೊಂಡಿದ್ದ.

ಯಾಕಂದ್ರೆ ಆರೀಫ್​ನ ಮದುವೆಯಾಗೋ ಮೊದಲು ಆಸೀಫ್​ ಮತ್ತು ವಸಂತಾ ಪ್ರೀತಿಸುತ್ತಿದ್ದರಂತೆ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದ್ರೆ ಬದಲಾದ ಸಮಯದಲ್ಲಿ ವಸಂತಾ,ಆಸೀಫ್​ ನನ್ನು ಬಿಟ್ಟು ಆತನ ಸಹೋದರ ಆರೀಫ್​ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆರೀಫ್​ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್​ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಿಟ್ಟಿನಲ್ಲಿ ಆಸೀಫ್​, ಮೇ 27 ರಂದು ಸಂಜೆ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿಧರ್ಮತೇಜ್ ನನ್ನು ಕೊಲೆ ಮಾಡಿದ್ದ. ಬಳಿಕ ಕೊನೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ.

ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೂವರದ್ದು ಕೂಡಾ ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅನ್ನೋದನ್ನು ಬಯಲಿಗೆಳೆದಿದ್ದಾರೆ. ಜೊತೆಗೆ ಘಟನೆ ನಡೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://youtu.be/rPF1gDJg3cE?si=lbl2AoreqJ2aCsRQ

Advertisement
Advertisement
Previous Post

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಸ್ ಗೆ ಡಿಕ್ಕಿಯಾದ ಲಾರಿ : ಚಾಲಕ ಸಹಿತ ಹಲವರಿಗೆ ಗಾಯ

Next Post

ಕಕ್ಕಿಂಜೆ : ಆಸ್ಪತ್ರೆಗೆ ಅಕ್ರಮ ಪ್ರವೇಶಿಸಿ ಸೀಲ್ ಕಳವು : ಪ್ರಕರಣ ದಾಖಲು

OtherNews

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

March 16, 2026
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025

Leave a Reply Cancel reply

Your email address will not be published. Required fields are marked *

Recent News

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ: ಬೆಳ್ತಂಗಡಿಯ ಯುವತಿ ಬಂಧನ..!!

March 19, 2026
ಪುತ್ತೂರು : ರಿಕ್ಷಾ – ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ..!!

ಪುತ್ತೂರು : ರಿಕ್ಷಾ – ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ..!!

March 19, 2026
(ಮಾ.20) : ಪುತ್ತೂರಿನಲ್ಲಿ ‘ಶಾಸ್ತಾ ಕನ್ಸಲ್ಟೆನ್ಸಿ’ ಉದ್ಘಾಟನೆ..!!

(ಮಾ.20) : ಪುತ್ತೂರಿನಲ್ಲಿ ‘ಶಾಸ್ತಾ ಕನ್ಸಲ್ಟೆನ್ಸಿ’ ಉದ್ಘಾಟನೆ..!!

March 19, 2026
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸ್ಟೇಜ್ ತೆರವು..!!

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸ್ಟೇಜ್ ತೆರವು..!!

March 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page