ನೆಲ್ಯಾಡಿ : ಬೆಂಗಳೂರಿನ ನೆಲಮಂಗಲದಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ನೆಲ್ಯಾಡಿ ಎಂಜಿರ ಪರಕ್ಕಳದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.
ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ಕೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ ಯುವಕ.

ಥೋಮಸ್ ಮನೆಯಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳಿದ್ದು, ನೆಲಮಂಗಲ ಬಳಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಲಾರಿಯಡಿ ಬಿದ್ದು, ಯುವಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

























