ಮಂಡ್ಯ: ಕಾವೇರಿ ನದಿಯಲ್ಲಿ ಅಪರಿಚಿತ ಮಹಿಳೆ ಮತ್ತು ಪುರುಷನ ಶವ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂತೆಮಾಳದ ಬಳಿ ನಡೆದಿದೆ.
ಅನುಮಾನಾಸ್ಪದ ರೀತಿಯಲ್ಲಿ ಶವಗಳು ಪತ್ತೆ ಆಗಿದ್ದು, ನದಿಯಲ್ಲಿ ತೇಲುತ್ತಿದ್ದ ಜೋಡಿ ಶವ ನೋಡಲು ಜನರು ಮುಗಿಬಿದ್ದಿದ್ದರು.
ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ನದಿಯಿಂದ ಶವಗಳನ್ನು ಹೊರ ತೆಗೆದು ಗುರುತು ಪತ್ತೆಗಾಗಿ ತನಿಖೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

























