ವಿಟ್ಲ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ವಿಟ್ಲ ಘಟಕದ ವತಿಯಿಂದ ವಿಟ್ಲ ಕಸಬಾ ಗ್ರಾಮದ ಅನಿಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟಿನ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರು ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಮಾಡುತ್ತಿರುವ ಕಾರ್ಯಗಳನ್ನು ವಿವರಿಸಿ, ಶಾಲೆಯ ಬೆಳವಣಿಗೆಗೆ ತಮ್ಮಿಂದ ಹಾಗೂ ಇಲಾಖೆಯ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಪ್ರಸನ್ನ ಮಾರ್ತಾ ಅವರು ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯಬೇಕು. ಈ ನಿಟ್ಟಿನಲ್ಲಿ ಪರಿವಾರದ ಟ್ರಸ್ಟ್ ವತಿಯಿಂದ ಅನೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಕೊಡೆ ವಿತರಣೆ, ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಸೌಮ್ಯ ರವರು ಶಾಲೆಯ ಹಿನ್ನಲೆ , ವಿದ್ಯಾರ್ಥಿಗಳ ವಿವರ, ಶಾಲೆಗೆ ಊರಿನವರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿ ತಮ್ಮ ಶಾಲೆಯನ್ನು ಆಯ್ಕೆ ಮಾಡಿದಕ್ಕೆ ಪುತ್ತಿಲ ಪರಿವಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ವಿಟ್ಲ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಘುರಾಮ ರೈ, ಪರಿವಾರದ ಪ್ರಮುಖರಾದ ಲಕ್ಷ್ಮಣ ಗೌಡ ಮಂಜಲಾಡಿ, ರೂಪೇಶ್, ಸ್ಥಳೀಯ ಮುಖಂಡರಾದ ಈಶ್ವರ ಭಟ್ ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಕೃಷ್ಣ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನವೀನ್ ಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಅನಂತ ಪ್ರಸಾದ್, ಹರೀಶ್ ಪೂಜಾರಿ ಮರುವಾಳ, ನಿತಿನ್ ಬೊಡ್ಡೋಣಿ, ವಿನೋದ್ ಕೂಡೂರು, ಮನೀಶ್ ಕುಲಾಲ್, ಅಜಿತ್, ಶನ್ಮಿತ್ ರೈ ಹಾಗೂ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


























