ನೆಲ್ಯಾಡಿ : ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ನೆಲ್ಯಾಡಿ ಸಮೀಪದ ಉದನೆಯ ನೆಲ್ಯಡ್ಕ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರನ್ನು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನಳಾಲು ನಿವಾಸಿ ರವಿ ಎಂದು ಗುರುತಿಸಲಾಗಿದೆ.
ನೇಲ್ಯಡ್ಕ ಶಾಲೆಯ ಮುಂಭಾಗ ನೂತನವಾಗಿ ನಿರ್ಮಾಣವಾಗಿರುವ ಫ್ಲೈಓವರ್ ನಲ್ಲಿ ಈ ಅಪಘಾತ ನಡೆದಿದೆ.


























