ಮುಂಡೂರು : ಕೋವಿಡ್ ನಿಂದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ತಮ್ಮಿಂದ ಆಗುವ ಸಹಕಾರ ಮಾಡುವುದು ತಮ್ಮ ಧರ್ಮ ಎನ್ನೋ ರೀತಿಯಲ್ಲಿ ಮುಂಡೂರು ಪಂಚಾಯತ್ ನಲ್ಲಿ ಜನಪ್ರತಿನಿಧಿಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮುಂಡೂರ್ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ನಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಪ್ರೊಟೀನ್ ಪೌಡರ್ ಮತ್ತು ಪ್ರತಿ ಗರ್ಭಿಣಿ ಯರಿಗೆ 2ಲೀಟರ್ ಹಾಲು ನೀಡುವ ಮೂಲಕ ಮಾದರಿಯಾಗಿದ್ದಾರೆ. ತಮ್ಮ ವಾರ್ಡಿನಲ್ಲಿರುವ ಎಲ್ಲಾ ಗರ್ಭಿಣಿಯರು ಕೂಡ ಅರೋಗ್ಯ ವನ್ನು ಕಾಪಾಡಿಕೊಂಡು ಜಾಗ್ರತೆಯಿಂದ ಇರಬೇಕೆಂಬುದು ಜನಪ್ರತಿನಿಧಿಗಳ ಆಶಯ.
ಈ ಜನಸ್ನೇಹಿ ಕಾರ್ಯಕ್ರಮವು ಮುಂಡೂರ್ ಗ್ರಾಮ ಪಂಚಾಯತ್ ನ ಅಧ್ಯಕ್ಷ ರ ವಾರ್ಡಿನಲ್ಲಿ ನಡೆಯಿತು. ಪ್ರೊಟೀನ್ ಪೌಡರ್ ಸದಸ್ಯ ಅಶೋಕ್ ಪುತ್ತಿಲ ಮತ್ತು ಬಾಲಕೃಷ್ಣ ಪೂಜಾರಿ ನೀಡಿದರೆ. ಸುಮಾರು 35ಲೀಟರ್ ಹಾಲನ್ನು ಇನ್ನೊರ್ವ ಸದಸ್ಯೆ ಅರುಣಾ ಕಣ್ಣರ್ನೂಜಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರೊಟೀನ್ ಪೌಡರ್ ಮತ್ತು ಹಾಲನ್ನು ಅರ್ಹ ಫಲನುಭವಿಗಳಿಗೆ ವಿತರಿಸಿದರು.
ಆಶಾ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮೀ ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶರ್ಮಿಳಾ, ಸ್ಥಳೀಯ ಪ್ರಮುಖರಾದ ಅರುಣ್ ಪುತ್ತಿಲ, ಹಾಲು ಉತ್ಪಾದಕರ ಸಂಘದ ಸದಸ್ಯ ಅನಿಲ್ ಕಣ್ಣರ್ನೂಜಿ. ಶ್ರೀರಾಮ ಗೆಳೆಯರ ಬಳಗದ ಶ್ರೀಧರ ನಾಯ್ಕ್ ,ಧನಂಜಯ ನಾಯ್ಕ್, ಅಶೋಕ್ ನಾಯ್ಕ್, ಪುರಂದರ ಗೌಡ ಉಪಸ್ಥಿತರಿದ್ದರು.