ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರಿನ ಅಬ್ಬರ ಜೋರಾಗಿದೆ. ಹೀಗಿದ್ದರೂ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೀರಿಲ್ಲ ಎಂದು ದೂರಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಬಗ್ಗೆ ರಿಷಬ್ ಶ್ರೀವಾಸ್ತವ ಎಂಬ ಯುವಕನೊಬ್ಬ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವಕ ತಾನು ಕೆಲಸ ಮಾಡುವ ಕಚೇರಿ ಸ್ನಾನಗೃಹದಲ್ಲಿ ಬ್ರಷ್ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ‘ಪೀಕ್ ಬೆಂಗಳೂರು ಮೂಮೆಂಟ್! ಮನೆಯಲ್ಲಿ ನೀರಿಲ್ಲದ ಕಾರಣ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದೆ’ ಎಂದು ಅಡಿಬರಹ ನೀಡಿದ್ದಾನೆ.
ಕಳೆದ ವರ್ಷ ಮುಂಗಾರಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗಿತ್ತು. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆದರೂ ನಗರದಲ್ಲಿ ನೀರಿನ ಬಿಕ್ಕಟ್ಟು ಎಂಬಂತೆ ಪೋಸ್ಟ್ ಹಾಕಿದ್ದಾನೆ.
Peak Bengaluru Moment!
— 🎟Rishabh Srivastava (@arre_rishabh) June 6, 2024
Came to office at 10 am because there's no water at home. pic.twitter.com/ebZe8mtZLD



























