ಉತ್ತರ ಪ್ರದೇಶ : ಕಾರು ಅಪಘಾತದಲ್ಲಿ ನಾಲ್ವರು ಯುಟ್ಯೂಬರ್ಗಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಅವ್ರೋಹಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಾನವಾಜ್ ಎಂದು ಗುರುತಿಸಲಾಗಿದೆ.
ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಿಂದಾಗಿ ನಾಲ್ವರು ಯುಟ್ಯೂಬರ್ಗಳು ಸಾವಿಗೀಡಾಗಿದ್ದಾರೆ.
ನಾಲ್ವರು ಯುಟ್ಯೂಬರ್ಗಳು ‘ರೌಂಡ್ 2 ವಲ್ಡ್’ ಚಾನೆಲ್ಗಾಗಿ ಹಾಸ್ಯ ಕಂಟೆಂಟ್ ಮಾಡಲು ಸಕ್ರಿಯರಾಗಿದ್ದರು ಮತ್ತು ಅದೇ ದಿನ ಹುಟ್ಟುಹಬ್ಬದ ಆಚರಣೆಗಾಗಿ ಮನೆಯಿಂದ ಹೊರಗೆ ಹೊರಟಿದ್ದರು. ಆದರೆ ಈ ವೇಳೆ ಕಾರಿನಲ್ಲಿ ಹೋಗುವಾಗ ಎದುರಿನಿಂದ ವೇಗವಾಗಿ ಬಂದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ಸಮಯದಲ್ಲಿ ಅಲ್ಲಿ ಸೇರಿದ ಜನರು ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹಸನ್‌ಪುರ ಸಿಒ ದೀಪ್ ಕುಮಾರ್ ಪಂತ್ ಘಟನೆ ಬಗ್ಗೆ ವಿವರಿಸಿದ್ದು, ಮನೋಟಾ ಸೇತುವೆಯ ಬಳಿ ಅಪಘಾತ ಸಂಭವಿಸಿದೆ, ಎರಡು ಕಾರುಗಳು ಅತಿವೇಗದಿಂದ ಡಿಕ್ಕಿ ಹೊಡೆದಿವೆ. ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಂದು ಕಾರಿನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.


























