ಪುತ್ತೂರು : ಒಂಟಿ ಸಲಗವೊಂದು ಸುಳ್ಯ ಪುತ್ತೂರಿನ ಹಲವು ಗ್ರಾಮಗಳಿಗೆ ಹೆಜ್ಜೆ ಹಾಕುತ್ತಾ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ.

ಅಭಯಾರಣ್ಯದಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾದ ಒಂಟಿ ಸಲಗ ಜೂ.10 ರಂದು ವೀರಮಂಗಲದಿಂದ ಶಾಂತಿಗೋಡಿಗೆ ಲಗ್ಗೆ ಇಟ್ಟಿದ್ದು, ಆನೆ ಹೊಳೆ ಬದಿಯಿಂದಲೇ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ತಲುಪಿ ಸದ್ಯ ಕೊಡಿಮರದಲ್ಲಿದೆ ಎಂದು ತಿಳಿದು ಬಂದಿದೆ.