ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ ಎನ್ ರವರ ನೇತೃತ್ವದಲ್ಲಿ ವಿದ್ಯಾಸಂಸ್ಥೆಯಲ್ಲಿ ನೂತನ ಮಂತ್ರಿಮಂಡಲ ರಚಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮತ್ತು ಮತದಾನದ ಅರಿವು ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳು ಮತದಾನ ಮಾಡುವದರೊಂದಿಗೆ ಚುನಾವಣೆಯ ಮೂಲಕ ಶಾಲಾ ನಾಯಕ ಹಾಗೂ ಉಪನಾಯಕರ ಆಯ್ಕೆ ಮಾಡಲಾಯಿತು.
ಈ ಚುನಾವಣೆಯಲ್ಲಿ ಶಾಲಾ ನಾಯಕನಾಗಿ 10 ನೇ ತರಗತಿಯ ವಿದ್ಯಾರ್ಥಿಯಾದ ಪ್ರತೀಕ್ ಎನ್ .ಎಸ್ ಉಪನಾಯಕಿಯಾಗಿ 9ನೇ ತರಗತಿ ವಿದ್ಯಾರ್ಥಿನಿಯಾದ ತನ್ಮಯಿ ಎಸ್. ಆರ್ ಆಯ್ಕೆ ಗೊಂಡಿರುತ್ತಾರೆ. ಈ ಚುನಾವಣಾ ಜವಾಬ್ದಾರಿಯನ್ನು ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ಪ್ರಮೀಳಾ .ಜಿ ಹಾಗೂ ಶ್ರೀಮತಿ ಪ್ರಶಾಂತಿ .ಪಿ ರವರು ನಿರ್ವಹಿಸಿದರು.




























