ಬಂಟ್ವಾಳ : ಬೋಳಂಗಡಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸತ್ತ ಪ್ರಾಣಿಗಳ ತ್ಯಾಜ್ಯಗಳನ್ನು ಬಿಸಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.17 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಬೋಳಂಗಡಿ ಕಾಸ್ರ್ ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯಾರೋ ಅಪರಿಚಿತರು ಸತ್ತ ಕೋಳಿ,ಕುರಿ,ಆಡು ಇತ್ಯಾದಿ ಪ್ರಾಣಿಗಳ ಕೊಳೆತ ತ್ಯಾಜ್ಯಗಳನ್ನು ಬಿಸಾಡಿದ್ದು, ಇದರ ಪರಿಣಾಮದಿಂದ ಸಾರ್ವಜನಿಕರಿಗೆ ರೋಗಗಳು ಹರಡುವ ಸಂಭವವಿದ್ದು, ಆದುದರಿಂದ ಕೊಳೆತ ತ್ಯಾಜ್ಯಗಳನ್ನು ಬಿಸಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪಾಣೆಮಂಗಳೂರು ನಿವಾಸಿ ಚಂದ್ರಶೇಖರ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 105/2024 ಕಲಂ 269,270 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























