ಸುಳ್ಯ : ಪೊಲೀಸ್ ಠಾಣೆಗೆ ಸಂಘಟನೆ ವತಿಯಿಂದ ನೀಡಿದ ದೂರುಗಳಿಗೆ, ಮಾಹಿತಿಗಳಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಇನ್ನು ನಾವು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ. ದೈವವೇ ನಮಗೆ ನ್ಯಾಯ ಕೊಡಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡದ ಕಾರ್ಯಕರ್ತರು ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಹಿಂದೂ ಸಂಘಟನೆ ಕಾರ್ಯಕರ್ತರಾದ ನಾವು ನಮಗೆ ಬಂದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡುತ್ತಿದ್ದು, ಆದರೇ ಅಧಿಕಾರಿಗಳು ಅದನ್ನು ಬಿಟ್ಟು ಬಿಡುತ್ತಿದ್ದಾರೆ. ಮಾಹಿತಿ ನೀಡಿದ ಬಳಿಕದ ಬೆಳವಣಿಗೆಗಳ ಬಗ್ಗೆ ಏನು ಹೇಳುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಯಕರ್ತರಾದ ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ದೇವಿಪ್ರಸಾದ್ ಅತ್ಯಾಡಿ, ನವೀನ್ ಎಲಿಮಲೆ, ಪ್ರಕಾಶ ಯಾದವ್, ಅರವಿಂದ ಸೇರಿದಂತೆ 20ಕ್ಕೂ ಅಧಿಕ ಮಂದಿ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.


























