ತೆಲಂಗಾಣ : ಗನ್‌ಪಾಯಿಂಟ್‌ನಲ್ಲಿ ಮಹಿಳಾ ಕಾನ್ಸ್ಟೇಬಲ್ ಮೇಲೆ ಪೊಲೀಸರೇ ಅತ್ಯಾಚಾರವೆಸಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರವೆಸಗಿದ ಪೊಲೀಸರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.
ಭೂಪಾಲಪಲ್ಲಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿತ್ತು.
ಕಾಳೇಶ್ವರಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭವಾನಿ ಸೇನ್, ಜಯಶಂಕರ್ ಎಂಬವರು ಮಹಿಳಾ ಕಾನ್ಸ್ಟೇಬಲ್ ಮೇಲೆ ಅತ್ಯಾಚಾರವೆಸಗಿದ್ದರು. ಬಂದೂಕು ತೋರಿಸಿ ಕ್ರೌರ್ಯ ಮೆರೆದಿದ್ದರು.
ಇದೀಗ ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರನ್ನು ಬಂಧಿಸಿ 14 ದಿನಗಳ ಕಾಲ ರಿಮಾಂಡ್ಗೆ ನೀಡಲಾಗಿದೆ. ಈ ಹಿಂದೆಯೂ ಎಸ್‌ಐ ತನ್ನ ಹುದ್ದೆಯ ಲಾಭ ಪಡೆದು ಮೂವರು ಮಹಿಳಾ ಕಾನ್ಸ್ಟೇಬಲ್ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪ ಇದ್ದು ಪ್ರಕರಣ ಕೂಡ ದಾಖಲಿಸಲಾಗಿತ್ತು.


























