ವಿಟ್ಲ : ವಿಟ್ಠಲ ಎಜುಕೇಶನ್ ಸೊಸೈಟಿಯಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು.

ಯೋಗದ ಮಹತ್ವವನ್ನು ಉಪನ್ಯಾಸಕ ಪ್ರಕಾಶ್ ನಾಯಕ್ ತಿಳಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಯೋಗಾಭ್ಯಾಸ ಮಾಡಿಸಿದರು.

ಕೋಶಾಧಿಕಾರಿ ಬಾಬು ಕೊಪ್ಪಳ, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು. ಮುಕ್ತಶ್ರೀ ಸ್ವಾಗತಿಸಿ ನಿರೂಪಿಸಿದರು. ಕೃಪಾ ಸಹಕರಿಸಿದರು. ರೂಪಶ್ರೀ ವಂದಿಸಿದರು. ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.



























