ವಿಟ್ಲ : ವಿದ್ಯುತ್ ಕಂಬವೊಂದು ಅಪಾಯ ಸ್ಥಿತಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಧರೆಗುರುಳಲು ಸಿದ್ಧವಾಗಿರುವ ಘಟನೆ ವಿಟ್ಲ ಸಮೀಪದ ಕಾಶಿಮಠ ಬೆಳಕಿಗೆ ಬಂದಿದೆ.

ಅಂತರ್ರಾಜ್ಯ ಹೆದ್ದಾರಿಯ ವಿಟ್ಲ ಸಮೀಪದ ಕಾಶಿಮಠ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವೊಂದು ಯಾವುದೇ ಕ್ಷಣದಲ್ಲಾದರೂ ಧರೆಗುರುಳುವ ಸಂಭವವಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಹಲವಾರು ವಾಹನಗಳು ತೆರಳುತ್ತಿರುತ್ತವೆ ಈ ವೇಳೆ ಕಂಬ ಬಿದ್ದರೆ ಅಪಾಯವಾಗುವ ಸಂಭವವಿದ್ದು, ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

























