ಪುತ್ತೂರು ತಾಲೂಕು ಮರಾಠಿ ಸಮಾಜ ಸೇವಾಸಂಘದ ಮಾಜಿ ಅಧ್ಯಕ್ಷ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಸೇಸು ನಾಯ್ಕ ಬನ್ನೂರು (ವ.69)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಮಾರು 39 ವರ್ಷಗಳ ಕಾಲ ಸಿಂಡಿಕೇಟ್ಬ್ಯಾಂಕ್ ಪುತ್ತೂರು, ಉಪ್ಪಿನಂಗಡಿ ಮತ್ತಿತರ ಕಡೆಗಳಲ್ಲಿ ಸೇವೆಸಲ್ಲಿಸಿ ಮಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದರು. ಪ್ರಸ್ತುತ ಪುತ್ತೂರು ತಾಲೂಕು ಪಂಚಾಯತ್ ಕಟ್ಟಡದಲ್ಲಿಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿಯಮಿತದಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ರತ್ನಾ ಸೇಸು ನಾಯ್ಕ, ಪುತ್ರ, ಪಂಜಾಬ್ನ್ಯಾಷನಲ್ ಬ್ಯಾಂಕ್ ಪಣಜಿಯ ಚೀಫ್ ಮ್ಯಾನೇಜರ್ ರಜನೀಕಾಂತ್, ಪುತ್ರಿ ರೇಖಾದೀಪಕ್ ಮಂಗಳೂರು, ಅಳಿಯ ಕೆಎಸ್ಆರ್ಟಿಸಿ ಡಿವಿಜನಲ್ ಮ್ಯಾನೇಜರ್ ಆಗಿರುವದೀಪಕ್, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಪುತ್ತೂರಿನ ಹಿಂದೂರುದ್ರಭೂಮಿಯಲ್ಲಿ ನ.20ರಂದು ಬೆಳಗ್ಗೆ ಜರಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.