ಪುತ್ತೂರು : ನಗರ ಸಭಾ ವ್ಯಾಪ್ತಿಯ ಬನ್ನೂರು ಜೈನರಗುರಿ ಎಂಬಲ್ಲಿ ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಪಕ್ಕದ ಮನೆಯವರ ತಡೆಗೋಡೆ ಮಜೀದ್ ಎಂಬವರ ಮನೆಗೆ ಜರಿದು ಬಿದ್ದಿದ್ದು ಸಣ್ಣ ಮಗುವಿಗೆ ಗಾಯವಾಗಿದ್ದು, ಉಳಿದವರು ಪ್ರಾಣಹಾನಿಯಾಗದೆ. ದೊಡ್ಡ ಅನಾಹುತದಿಂದ ಪಾರಾಗಿದ್ದು, ಸ್ಥಳಕ್ಕೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ನೀಡಿದರು.

ಸ್ಥಳದಿಂದಲೇ ಬೆಂಗಳೂರು ನಲ್ಲಿರುವ ಶಾಸಕ ಅಶೋಕ್ ಕುಮಾರ್ ರೈ ಯವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ವಿಷಯವನ್ನು ತಿಳಿಸಿ ಶಾಸಕ ಸೂಚನೆಯಂತೆ ಹಾನಿಗೀಡಾದ ಮನೆಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದೆಂದು ಮಜೀದ್ ರವರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಮ್ಮದ್ ಆಲಿಯವರು ತಹಶೀಲ್ದಾರ್ ರನ್ನು ಸಂಪರ್ಕಿಸಿ ಜರಿದ ಮಣ್ಣುಗಳನ್ನು ನಗರ ಸಭೆಯ ಜೆಸಿಬಿ ಮೂಲಕ ತೆರವುಗೊಳಿಸುವಂತೆ ಮನವಿ ಮಾಡಿದರು.

























