ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿರುವ ಪ್ರಮುಖ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲಾಕ್ಡೌನ್ನಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಿಎಂ ಅವರು ಇಂದು ಎರಡನೇ ಬಾರಿಗೆ 500 ಕೋಟಿ ರೂಪಾಯಿ ವೆಚ್ಚದ ವಿಶೇಷ ಪ್ಯಾಕೇಜ್ಅನ್ನು ಘೋಷಣೆ ಮಾಡಿದರು.
ಹೈಲೆಟ್ಸ್ :
- ಅಸಂಘಟಿತ ಕಾರ್ಮಿಕರಿಗೆ ತಲಾ ₹ 3 ಸಾವಿರ ಪರಿಹಾರ
- ಕಲಾವಿದರು, ತಂತ್ರಜ್ಞರಿಗೆ 3 ಸಾವಿರ ರೂ. ಪರಿಹಾರ
- ಆಶಾ ಕಾರ್ಯಕರ್ತರಿಗೆ 3 ಸಾವಿರ ರೂ. ಪರಿಹಾರ
- ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ಪರಿಹಾರ
- ಮೀನುಗಾರರಿಗೆ ತಲಾ 3 ಸಾವಿರ ಪರಿಹಾರ ಘೋಷಣೆ
- ಮುಜರಾಯಿ ದೇಗುಲದ ಅರ್ಚಕರು, ನೌಕರರಿಗೆ ₹ 3 ಸಾವಿರ
- ನ್ಯಾಯವಾದಿಗಳ ಸಂಘಕ್ಕೆ ₹5 ಕೋಟಿ ಪರಿಹಾರ
- ಮಗ್ಗಗಳ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಪರಿಹಾರ
- ಸಣ್ಣ ಕೈಗಾರಿಕೆಗಳ ವಿದ್ಯುತ್ ಶುಲ್ಕ ಪಾವತಿಯಿಂದ ವಿನಾಯಿತಿ
- ಅನುದಾನ ರಹಿತ ಶಿಕ್ಷಕರಿಗೆ ತಲಾ ₹5 ಸಾವಿರ
- ಶಾಲಾ ಮಕ್ಕಳಿಗೆ ಜೂನ್, ಜುಲೈ ತಿಂಗಳಿನಲ್ಲಿ ಹಾಲಿನ ಪುಡಿ ವಿತರಣೆ