ಮುಂಬೈ : ಜಿಮ್ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಈಜಾಡಲೆಂದು ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಪುಣೆಯ ತಮ್ಹಿನಿ ಘಾಟ್‌ನ ವಾಟರ್ಫಾಲ್ಸ್ನಲ್ಲಿ ನಡೆದಿದೆ.
ಪುಣೆಯ ಭೋಸಾರಿ ಪ್ರದೇಶದ ಪಿಂಪ್ರಿ ಚಿಂಚ್ವಾಡ್ನ ನಿವಾಸಿ ಸ್ವಪ್ನಿಲ್ ಧಾವ್ಡೆ ಸಾವನ್ನಪ್ಪಿದ ಯುವಕ.
ಸ್ವಪ್ನಿಲ್ ಧಾವ್ಡೆ ತನ್ನ ಜೊತೆ ಜಿಮ್ ಮಾಡುವ 32 ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದನು. ಈ ವೇಳೆ ತಮ್ಹಿನಿ ಘಾಟ್‌ನ ಜಲಪಾತಕ್ಕೆ ಈಜಾಡಲೆಂದು ಜಂಪ್ ಮಾಡಿದ್ದಾನೆ. ಆದರೆ ನೀರಿನ ರಭಸ ಜೋರಾಗಿದ್ದರಿಂದ ಈಜಲು ಸಾಧ್ಯವಾಗದೆ ಹಾಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಯುವಕ ಈಜಲೆಂದು ಜಲಪಾತದ ನೀರಿಗೆ ಜಂಪ್ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಯುವಕನು ನೀರಿಗೆ ಜಿಗಿದು ಈಜಿ ದಡ ಸೇರಲು ಮುಂದಾಗುತ್ತಾನೆ. ಆದರೆ ನೀರಿನ ಹರಿಯುವ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದು, ಘಟನೆ ನಡೆದ ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.


























