ಉಡುಪಿ : ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, ಪಳ್ಳಿದಾದಬೆಟ್ಟು ನಿವಾಸಿ ಜಯರಾಮ ಆಚಾರ್ಯ, ಚಂದ್ರಿಕಾ ದಂಪತಿ ಪುತ್ರಿ ಭಾಗ್ಯಶ್ರೀ (16) ಹೃದಯಾಘಾತದಿಂದ ನಿಧನರಾದರು.
ಹೃದಯ ಸಂಬಂಧಿ ಕಾಯಿಲೆ ಇದ್ದ ಭಾಗ್ಯಶ್ರೀ ಮಂಗಳವಾರ ಶಾಲೆಗೆ ಬಂದಿದ್ದರು. ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೆತ್ತವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಮೃತರು ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



























