ಬೆಂಗಳೂರು : ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ತತ್ತರಗೊಂಡಿವೆ. ಮತ್ತೆ ಮೂರು ಗಂಟೆಯ ಒಳಗಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆ ಬಿದ್ದಿದ್ದು, ಈಗಾಗಲೇ ಈ ಭಾಗದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಕರ್ನಾಟಕದ ಕರಾವಳಿ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದಲ್ಲಿ ಇಂದು ಭಾರೀ ಮಳೆಯಾಗಲಿದ್ದು, ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 4-5 ದಿನ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
24 ಗಂಟೆಯಟೆಯಲ್ಲಿ ಎಲ್ಲಿ ಎಷ್ಟು ಮಳೆಯಾಗಿದೆ?
- ಉತ್ತರ ಕನ್ನಡ : 264 ಮಿ.ಮೀ.
- ಉಡುಪಿ: 210.5 ಮಿ.ಮೀ.
- ದಕ್ಷಿಣ ಕನ್ನಡ : 168 ಮಿ.ಮೀ.
- ಶಿವಮೊಗ್ಗ : 118.5 ಮಿ.ಮೀ.
- ವಿಜಯಪುರ : 89 ಮಿ.ಮೀ.
- ಬೆಳಗಾವಿ : 87.5 ಮಿ.ಮೀ.
- ಚಿಕ್ಕಮಗಳೂರು: 67.5 ಮಿ.ಮೀ.
- ಕೊಡಗು: 58.5 ಮಿ.ಮೀ.