ಮಂಗಳೂರು : ಭಾರೀ ಮಳೆಗೆ ಮಂಗಳೂರಿನಲ್ಲಿ ಮತ್ತೊಂದು ಅವಘಡ ನಡೆದಿದೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುಲ್ಕಿ ತಾಲೂಕಿನ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಂಪು ಕಲ್ಲಿನ ಐದಾರು ಅಡಿ ಎತ್ತರದ ತಡೆಗೋಡೆ ಕುಸಿದು ಬಿದ್ದಿದೆ.
ಘಟನೆಯಲ್ಲಿ ವಿದ್ಯುತ್ ಕಂಬ, ಬಾವಿ ಹಾಗೂ ದೇವಸ್ಥಾನದ ಪಾರ್ಕಿಂಗ್ ಜಾಗಕ್ಕೆ ಹಾನಿಯಾಗಿದೆ.
ಈ ವೇಳೆ ಯಾವುದೇ ವಾಹನ ಪಾರ್ಕ್ ಮಾಡದ ಹಿನ್ನಲೆ ಭಾರೀ ಅನಾಹುತ ತಪ್ಪಿದೆ.
ಸದ್ಯ ಮಣ್ಣು ತೆಗೆದು ಪ್ಲಾಸ್ಟಿಕ್ ಟರ್ಪಾಲು ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿದೆ.
























