ಪುತ್ತೂರು : ಮಿಶೋ ಹೆಸರಿನಲ್ಲಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೋರ್ವರಿಗೆ 2024ನೇ ಏಪ್ರಿಲ್ ತಿಂಗಳಲ್ಲಿ ಮೀಶೋ ನಲ್ಲಿ ಕ್ಯಾಶ್ ಪ್ರೈಜ್ ಬಂದಿರುವುದಾಗಿ ಅಂಚೆ ಮುಖೇನಾ ಕೂಪನ್ ಬಂದಿದ್ದು, ಅದರಲ್ಲಿದ್ದ ಕೋಪನ್ ನಲ್ಲಿ ರೂ.14,75,000/- ಕ್ಯಾಶ್ ಪ್ರೈಜ್ ವಿನ್ ಆಗಿರುತ್ತೀರಿ ಎಂಬುದಾಗಿ ನಮೂದಿಸಿದ್ದು, ಸದ್ರಿ ಕೂಪನ್ ನೊಂದಿಗೆ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿಯು ಬ್ಯಾಂಕ್ ಮಾಹಿತಿಗಳನ್ನು ಹಾಗೂ ಗುರುತಿನ ಚೀಟಿಗಳನ್ನು ಕೇಳಿದ್ದು, ಅದರಂತೆ ವಾಟ್ಸಪ್ ಮುಖೇನಾ ಕಳುಹಿಸಿದ್ದು, ನಂತರ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕ್ಯಾಶ್ ಪ್ರೈಜ್ ನಲ್ಲಿ ಬಂದಿರುವ ಹಣ ಪಡೆಯಬೇಕಾದರೆ TDS, GST, NOC ಹಾಗೂ ಇನ್ನಿತರ ಚಾರ್ಜಸ್ಗಳಿಗೆ ಹಣ ಕಟ್ಟಬೇಕೆಂದು ತಿಳಿಸಿದ್ದು, ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ 6,62,450 ರೂ. ಹಣ ಕಳುಹಿಸಿರುತ್ತಾರೆ. ಸದ್ರಿ ಅಪರಿಚಿತರು ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 21/2024 ಕಲಂ: 66(C), 66(D) IT ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.


























