ಕುಂಬ್ರ : ಪುತ್ತೂರು, ಸುಳ್ಯ, ಎಡಮಂಗಲದಲ್ಲಿ ಶಾಖೆಗಳನ್ನೊಳಗೊಂಡಿರುವ ‘ಫ್ರೆಂಡ್ಸ್ ಬೇಕ್ ಬೇಕರಿ’ ನೂತನ ಶಾಖೆ ಜು.11 ರಂದು ಕುಂಬ್ರ ಜಂಕ್ಷನ್ ನಲ್ಲಿ ಶುಭಾರಂಭಗೊಳ್ಳಲಿದೆ.
ಶಾಸಕರಾದ ಅಶೋಕ್ ಕುಮಾರ್ ರೈ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಕುಂಬ್ರ ಹರ್ಷ ಸಂಕೀರ್ಣದ ಮಾಲಕರಾದ ಹರ್ಷಕುಮಾರ್ ರೈ ಮಾಡಾವು ರವರು ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫ್ರೆಂಡ್ಸ್ ಬೇಕ್ ಬೇಕರಿ ಶುಭಾರಂಭದಂದು ‘ಉದ್ದಡ್ಕ ಕಲ್ಲುರ್ಟಿ’ ತುಳು ಭಕ್ತಿಗೀತೆ ಲೋಕಾರ್ಪಣೆಗೊಳ್ಳಲಿದೆ.
ಶುಭಾರಂಭದ ಪ್ರಯುಕ್ತ ಜು.11 ರಂದು ಗ್ರಾಹಕರಿಗೆ ವಿಶೇಷ ಆಫರ್ ಲಭ್ಯವಿದ್ದು, 1000 ರೂ. ಸ್ವೀಟ್ಸ್ ಖರೀದಿಸಿದರೆ 2 ಲೀಟರ್ ಜ್ಯೂಸ್ ಬಾಟಲ್ ಉಚಿತವಾಗಿ ದೊರೆಯಲಿದೆ. 1 ಕೆ.ಜಿ ಕೋಲ್ಡ್ ಕೇಕ್ ಖರೀದಿಸಿದರೆ 1/2 ಲೀಟರ್ ಜ್ಯೂಸ್ ಬಾಟಲ್ ಉಚಿತವಾಗಿ ದೊರೆಯಲಿದೆ. 1/2 ಕೆಜಿ ಕೋಲ್ಡ್ ಕೇಕ್ ಖರೀದಿಸಿದರೆ 1/4 ಲೀಟರ್ ಜ್ಯೂಸ್ ಬಾಟಲ್ ಉಚಿತವಾಗಿ ದೊರೆಯಲಿದೆ.
ವಿವಿಧ ಬಗೆಯ ವೆಜ್ & ನಾನ್ ವೆಜ್ ಪಫ್ಸ್, ಕೇಕ್ಸ್ ಹಾಗೂ ಎಲ್ಲಾ ರೀತಿಯ ಸ್ವೀಟ್ಸ್ ಐಟಂಗಳು, ಚಾ, ಕಾಫಿ, ಫ್ರೆಶ್ ಜ್ಯೂಸ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಕರುಣಾಕರ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























