ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್ ಕೇಸ್ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಮಾಡಲಾಗಿದೆ. ಆ ಜಾಗಕ್ಕೆ ಮತ್ತೆ ಕಾಪು ಇನ್ಸ್ಪೆಕ್ಟರ್ ಆಗಿರುವ ಮಹೇಶ್ ಪ್ರಸಾದ್ ಅವರನ್ನು ನೇಮಕಮಾಡಲಾಗಿದೆ.
ಎರಡು ತಿಂಗಳ ಹಿಂದೆ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ನಟಿ ಅನುಶ್ರೀ ಸೇರಿದಂತೆ ಡ್ರಗ್ಸ್ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ದಿಢೀರ್ ಆಗಿವರ್ಗಾಯಿಸಿದ್ದು ವಿರೋಧಕ್ಕೆ ಕಾರಣವಾಗಿತ್ತು ಕಾಣದಕೈಗಳ ಒತ್ತಡದ ಕಾರಣ ವರ್ಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ವರ್ಗಾವಣೆಗೆ ತಾತ್ಕಾಲಿಕ ತಡೆ ಹಾಕಿದ್ದ ಸರಕಾರ ಈಗ ಮತ್ತೆ ಜಾರಿ ಮಾಡಿದೆ. ಇದೀಗ ಮತ್ತೆ ಮಂಗಳೂರು ಸಿಸಿಬಿ ಗೆ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಿದೆ.