ಬೆಳಗಾವಿ : ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯ ಹಿನ್ನೆಲೆ ಲಾರಿಯೊಂದು ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ.
ಚೋರ್ಲಾಘಾಟ್ ನಲ್ಲಿ ರಸ್ತೆ ಮಣ್ಣು ಕುಸಿದ ಕಾರಣ ಲಾರಿ ಆಳದ ಕಮರಿಗೆ ಬಿದ್ದಿದೆ.
ಲಾರಿ ರಸ್ತೆ ಪಕ್ಕ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಲಾರಿಯನ್ನು ಎತ್ತಲು ಜೆಸಿಬಿಯನ್ನು ಕರೆಸಲಾಗಿತ್ತು. ಈ ವೇಳೆ ಲಾರಿಯನ್ನು ಮೇಲಕೆತ್ತುವ ಸಂದರ್ಭ ಪ್ರಪಾತಕ್ಕೆ ಬಿದ್ದಿದೆ. ಲಾರಿ ಪ್ರಪಾತಕ್ಕೆ ಬೀಳುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.




























