ನರಿಕೊಂಬು: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮೊಗರುನಾಡು ಇಲ್ಲಿ ವಾಸವಿರುವ ನಿವೃತ್ತ ಸೈನಿಕ ಮೋಹನ್ ರವರು ತನ್ನ ಪತ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ, ಬಾಳ್ತಿಲ ಇದರ ಉಪಕೇಂದ್ರ ನರಿಕೊಂಬು ಇಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಸುಮತಿಯ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ನರಿಕೊಂಬು ಹಾಗೂ ಶಂಭೂರು ಗ್ರಾಮ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತರಿಗೆ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಪ್ಲೇಟು, ಲೋಟ, ಸ್ಯಾನಿಟೈಸರ್, ಮಾಸ್ಕನ್ನು ತಮ್ಮ ಮನೆಯಲ್ಲಿ ವಿತರಿಸಿದರು.
ಕಿಟ್ ಅನ್ನು ಸ್ವೀಕರಿಸಿದ ಆಶಾಕಾರ್ಯಕರ್ತೆಯರು ಮೋಹನ ಸುಮತಿ ದಂಪತಿಗಳಿಗೆ ಅಭಿನಂದನೆಯನ್ನು ತಿಳಿಸಿದರು.