ಸುಳ್ಯ : ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಸುಳ್ಯ ನಿವಾಸಿ ವ್ಯಕ್ತಿಯೋರ್ವರ ವಾಟ್ಸಪ್ ಗೆ ಜೂ.12 ರಂದು Google India Digital Services Private Limited ನಲ್ಲಿ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹಾಗೂ ಅದಕ್ಕಾಗಿ ಗೂಗಲ್ ಮ್ಯಾಪ್ ನಲ್ಲಿ ಅವರು ಹೇಳುವ ರೆಸ್ಟೋರೆಂಟ್ ಕ್ಲಿಕ್ ಮಾಡಿ ಅದಕ್ಕೆ 5 ಸ್ಟಾರ್ ನೀಡಿ ರಿವ್ಯೂ ಬರೆಯಬೇಕಾಗಿ ತಿಳಿಸಿದ್ದು, ವ್ಯಕ್ತಿ ಒಪ್ಪಿರುತ್ತಾರೆ. ನಂತರ ಅವರುಗಳಿಂದ ಬಂದ ಸೂಚನೆಗಳ ಪ್ರಕಾರ, 3 ಟೆಲಿಗ್ರಾಂಗ್ರೂಪ್ ಗೆ ಜಾಯಿನ್ ಆಗಿದ್ದು, ನಂತರ ದಿನಗಳಲ್ಲಿ ಟಾಸ್ಕ್ ಗಾಗಿ ಹಣ ಹಾಕಲು ತಿಳಿಸಿದ್ದಕ್ಕೆ ಗೆಳೆಯನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ 2,18,000/-ಹಣ ವರ್ಗಾಯಿಸಿದ್ದು, ಆದರೆ ಅಪರಿಚಿತರು ಸದ್ರಿ ಮೊತ್ತವನ್ನು ಹಿಂತಿರುಗಿಸದೇ ವಂಚನೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜು.10 ರಂದು ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 23/2024 ಕಲಂ:66 (D) IT ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.



























