ಮೂಡಬಿದಿರೆ : ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಶ್ರೀನಿಧಿ ಶೆಟ್ಟಿ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೂಲ್ಕಿ- ಮೂಡಬಿದ್ರೆ ಸಮಿತಿ ವತಿಯಿಂದ ಮೂಡಬಿದ್ರೆ ಪೊಲೀಸ್ ಠಾಣಾಧಿಕಾರಿ ಸಂದೇಶ್ ಪಿ .ಜಿ ರವರನ್ನು ಭೇಟಿ ಮಾಡಿ ಸಮರ್ಪಕ ತನಿಖೆ ನಡೆಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುಹಾನ್ ಆಳ್ವ , ಮೂಲ್ಕಿ-ಮೂಡಬಿದ್ರೆ ಅಧ್ಯಕ್ಷ ಮನೀಷ್ ರಾಜ್, ಸೌಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಾಗ್ ಪೂಜಾರಿ , ಪ್ರತೀಕ್ , ರಫೀಜ್ , ಓಂ ಶ್ರೀ , ವಿಶಾಲ್, ರಾನ್ಸ್ಟನ್ , ಸೋಹನ್ ಉಪಸ್ಥಿತರಿದ್ದರು.





























