ಪುತ್ತೂರು : ಕಬಕದ ಕುಳ ಎಂಬಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಬಗ್ಗೆ ವರದಿಯಾಗಿದೆ.
ಕಬಕ-ವಿಟ್ಲ ರಸ್ತೆಯ ಅಂಗನವಾಡಿ ಪಕ್ಕದಲ್ಲೇ ಸುಮಾರು ನಾಯಿಗಳು ನಿನ್ನೆ ರಾತ್ರಿ ಬೊಗಳುವ ಸದ್ದಿಗೆ ಅಲ್ಲಿನ ಸಮೀಪದ ಮನೆಯವರು ಎದ್ದು ನೋಡಿದಾಗ ಚಿರತೆ ಓಡಾಡುವುದು ಕಂಡು ಬಂದಿದೆನ್ನಲಾಗಿದೆ.

ಭಯಭೀತಿಗೊಂಡ ಸ್ಥಳೀಯ ಮನೆಯ ಮೂಸಾ ಎಂಬವರು ಅವರ ಪತ್ನಿಗೆ ವಿಚಾರ ತಿಳಿಸಿದ್ದಾರೆ. ಈ ವೇಳೆ ಇಬ್ಬರೂ ಕಿಟಕಿಯಿಂದ ನೋಡುವಾಗ ಚಿರತೆ ಓಡಾವುದು ಕಂಡು ಬಂದಿದೆನ್ನಲಾಗಿದೆ.
ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕುಳ ಪ್ರದೇಶಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ದೊರಕಿದೆ.
ಇನ್ನು ಕೆಲ ಮನೆಯವರ ಜಾಗದಲ್ಲಿ ಚಿರತೆಯ ಕಾಲಿನ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಸದ್ಯ ಕುಳ ಸುತ್ತಮುತ್ತಲಿನ ಯಾರೂ ಕೂಡಾ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಕುಳ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅದರ ಮುಂದುವರಿದ ಭಾಗವಾಗಿ ಆ ಭಾಗದಲ್ಲೇ ಚಲಿಸಿದರೆ ಬಪ್ಪಳಿಗೆ ಸಮೀಪಕ್ಕೆ ಬರುವಂತ ಸಾಧ್ಯತೆಯೂ ಇದೆ. ಯಾಕಂದ್ರೆ ಕುಳ ಕಾಡು ಬಪ್ಪಳಿಗೆ ಪರಿಸರಕ್ಕೆ ಅಂಟಿಕೊಂಡಿದೆ. ಚಿರತೆ ಹಾದಿ ತಪ್ಪಿದ್ದಲ್ಲಿ ಬಪ್ಪಳಿಗೆ ಭಾಗಕ್ಕೆ ಎಂಟ್ರಿ ಕೊಟ್ಟು, ಪುತ್ತೂರು ನಗರಕ್ಕೆ ಆಗಮಿಸಿದ್ರೂ ಅಚ್ಚರಿಯಿಲ್ಲ.



























