ಭೂ ಕುಸಿತದಿಂದ ಎರಡು ಬಸ್ಗಳು ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಬಸ್ನಲ್ಲಿದ್ದ ಸುಮಾರು 65 ಜನರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ನೇಪಾಳದ ಚಿತ್ವಾನ್ ಜಿಲ್ಲೆಯ ನಾರಾಯಣ್-ಮುಗ್ಲಿಂಗ್ ರಸ್ತೆಯ ಸಿಮಲ್ವಾಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.
ತ್ರಿಶೂಲಿ ನದಿಯಲ್ಲಿ ಎರಡು ಬಸ್ಗಳು ಕೊಚ್ಚಿ ಹೋಗಿವೆ. ಪರಿಣಾಮ ಬಸ್ನಲ್ಲಿದ್ದ ಸುಮಾರು 65 ಮಂದಿ ನಾಪತ್ತೆಯಾಗಿದ್ದಾರೆ.
ಪ್ರಯಾಣಿಕರನ್ನು ಕಠ್ಮಂಡುವಿಗೆ ಕರೆದೊಯ್ಯುತ್ತಿದ್ದ ಏಂಜೆಲ್ ಮತ್ತು ಗಣಪತಿ ಡಿಲಕ್ಸ್ ಬಸ್ ಮುಂಜಾನೆ ಭೂಕುಸಿತದಿಂದ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಬಸ್ನಲ್ಲಿ 24 ಜನರು ಮತ್ತೊಂದು ಬಸ್ನಲ್ಲಿ 41 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಣಪತಿ ಬಸ್ನಲ್ಲಿದ್ದ ಮೂವರು ಪ್ರಯಾಣಿಕರು ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. 65 ಜನರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.




























