ವಿಟ್ಲ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಇದರ ಆಶ್ರಯದಲ್ಲಿ, ನಿಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮತ್ತು ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ವೈದ್ಯರುಗಳ ತಂಡದಿಂದ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ, ದಂತ ತಪಾಸಣೆ, ಚಿಕಿತ್ಸಾ ಶಿಬಿರ ಜು.14 ರಂದು ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.
ದಂತ ಚಿಕಿತ್ಸೆ, ರಕ್ತ ವರ್ಗೀಕರಣ, ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ, ಉಚಿತ ಕನ್ನಡಕ, ಬಿ.ಪಿ., ಶುಗರ್ ತಪಾಸಣೆ, ಇ.ಸಿ.ಜಿ., ಕಿವಿ, ಮೂಗು, ಗಂಟಲು ತಪಾಸಣೆ, ಎಲುಬು, ಚರ್ಮ, ಮಕ್ಕಳ ತಪಾಸಣೆ ಸೌಲಭ್ಯಗಳಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
