ಪುತ್ತೂರು : ಮರದ ಗೆಲ್ಲು ಬಿದ್ದ ಹಿನ್ನಲೆ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ವಿದ್ಯುತ್ ತಂತಿ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಸೂತ್ರಬೆಟ್ಟುವಿನಲ್ಲಿ ನಡೆದಿದೆ.

ಭಾರೀ ಮಳೆ ಹಿನ್ನಲೆ ಸೂತ್ರಬೆಟ್ಟು ಸಮೀಪ ನಿನ್ನೆ ರಾತ್ರಿ ಮರದ ಗೆಲ್ಲು ಬಿದ್ದಿದ್ದು, ಈ ವೇಳೆ ವಿದ್ಯುತ್ ಕಂಬ ನೆಲಕ್ಕುರುಳಿದೆ.
ವಿದ್ಯುತ್ ತಂತಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ರಸ್ತೆಯಲ್ಲಿ ಹಲವಾರು ಮಂದಿ ತೆರಳುವ ಹಿನ್ನಲೆ ಅಪಾಯ ಉಂಟಾಗುವ ಸಂಭವವಿದ್ದು, ಶೀಘ್ರ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



























