ಪುತ್ತೂರು: ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ ಕಳ್ಳರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೆಲ್ಯಾಡಿ ಸಮೀಪದ ಅಡ್ಡಹೊಳೆಯಲ್ಲಿ ನಡೆದಿದೆ.
ಅಂಗಡಿಯಲ್ಲಿದ್ದ ಒಂಟಿ ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲು ಯತ್ನಿಸಿದ್ದು ಈ ವೇಳೆ ಯುವಕರಿಬ್ಬರನ್ನು ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ತ್ರೇಸ್ಯಾಮಾ(60) ಎಂಬ ಮಹಿಳೆಯ ಚಿನ್ನದ ಸರ ಕದಿಯಲು ಆರೋಪಿಗಳು ಯತ್ನಿಸಿದ್ದರು.
ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಬಂಧಿತರು.

ಆರೋಪಿಗಳು ಕಳ್ಳತನ ಮಾಡುವ ಸಲುವಾಗಿ ಮಂಗಳೂರಿನಿಂದ ಕದ್ದ ಸ್ಕೂಟಿಯಲ್ಲಿ ಅಡ್ಡಹೊಳೆಗೆ ಬಂದಿದ್ದು ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಹೇಳಿ ಸ್ಕೂಟಿಯೊಂದಿಗೆ ಪರಾರಿಯಾಗಿದ್ದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.



























