ಪುತ್ತೂರು : ಮಹಿಳಾ ಬಂಟರ ಸಂಘದ ಮಹಾಸಭೆ ಇಂದು ನಡೆದಿದ್ದು, ಮುಂದಿನ 2 ಎರಡು ವರ್ಷಗಳ ಕಾಲ ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಗೀತಾ ಮೋಹನ್ ರೈ, ಕಾರ್ಯಾದರ್ಶಿಯಾಗಿ ಕುಸುಮಾ ಪಿ. ಶೆಟ್ಟಿ, ಖಜಾಂಜಿಯಾಗಿ ವಕೀಲರಾದ ಅರುಣಾ ಡಿ ರೈ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷರಾದ ಗೀತಾ ಮೋಹನ್ ರೈ ಅವರು ಬಂಟರ ಸಂಘದ ಹಿರಿಯ ನಿರ್ದೇಶಕ, ಸಹಕಾರಿ, ರಾಜಕೀಯ ಧುರೀಣ ಎಂ. ಮೋಹನ್ ರೈ ಅವರ ಪತ್ನಿ. ಇವರ ಮಗ ಮನು ಎಂ.ರೈ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರಾಗಿದ್ದು, ಹಲವು ಸಮಾಜಮುಖಿ ಕಾರ್ಯಗಳ ಮುಂದಾಳುವಾಗಿದ್ದಾರೆ.
ಕಾರ್ಯಾದರ್ಶಿಯಾದ ಕುಸುಮಾ ಪಿ. ಶೆಟ್ಟಿಯವರು ಸವಣೂರು ಪದ್ಮನಾಭ ಶೆಟ್ಟಿಯವರ ಪತ್ನಿ, ಸವಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಖಜಾಂಜಿ ಅರುಣಾ ಡಿ ರೈ ವಕೀಲರಾಗಿದ್ದು, ಖ್ಯಾತ ವಕೀಲರಾದ ದಿನಕರ್ ರೈ ಅವರ ಪತ್ನಿ.
ಈ ವೇಳೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.