ವಿಟ್ಲ : ಸಿಡಿಲು ಬಡಿದು ಮನೆಗೆ ಹಾನಿಯುಂಟಾದ ಘಟನೆ ವಿಟ್ಲ ಸಮೀಪದ ಕೇಪು ಗ್ರಾಮದ ಚೆಲ್ಲಡ್ಕದಲ್ಲಿ ನಡೆದಿದೆ.
ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ನಿನ್ನೆ ರಾತ್ರಿ ಸಿಡಿಲು ಬಡಿದು ಮನೆಯೊಳಗಿದ್ದ ಫ್ರಿಡ್ಜ್, ಗ್ರೈಂಡರ್, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿ ಹೊತ್ತಿ ಸುಟ್ಟುಹೋಗಿದ್ದು, ಬೆಂಕಿಯ ತೀವ್ರತೆಯು ಹೆಚ್ಚಾಗಿ ಮನೆಯ ಒಂದು ಬದಿಗೆ ಬೆಂಕಿ ತಗುಲಿ ಉರಿದಿದೆ.
ಸ್ಥಳೀಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅಗ್ನಿಶಾಮಕದಳದವರು ಸ್ಥಳಕಾಗಮಿಸಿ ಬೆಂಕಿ ನಂದಿಸಿದರು.
ಮನೆಯೊಳಗೆ ಶಶಿಶೇಖರ ಭಂಡಾರಿ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪಿಡಿಓ ಗೋಕುಲದಾಸ್ ಭಕ್ತ, ಪಂಚಾಯತ್ ಅಧ್ಯಕ್ಷರಾದ ರಾಘವ ಸಾರಡ್ಕ, ವಿಎ, ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಕಲ್ಲಂಗಳ, ಬಿಜೆಪಿ ಮುಖಂಡರಾದ ರಾಜೀವ ಭಂಡಾರಿ ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಎ ಆಫೀಸ್ ನ ಗಣೇಶ್ ಪ್ರಭು, ಗ್ರಾಮ ಪಂಚಾಯತ್ ಸಹಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.