ಪುತ್ತೂರು : ಎಮ್.ಆರ್.ಪಿ.ಎಲ್ ನ ರಿಟೇಲ್ ಔಟ್ ಲೆಟ್ ‘ಮಹೇಶ್ವರ ಪೆಟ್ರೋಲಿಯಂ’ ಜು.21 ರಂದು ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲದಲ್ಲಿ ಉದ್ಘಾಟನೆಗೊಳ್ಳಲಿದೆ.
ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ನೂತನ ಪೆಟ್ರೋಲ್ ಪಂಪ್ ಅನ್ನು ಉದ್ಘಾಟಿಸಲಿದ್ದಾರೆ.
ಶಾಸಕರಾದ ಅಶೋಕ್ ಕುಮಾರ್ ರೈ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಸೀತಾರಾಮ ರೈ ಸವಣೂರು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಹೇಮಾನಾಥ ಶೆಟ್ಟಿ ಕಾವು, ಪುತ್ತೂರು ಕರ್ನಾಟಕ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಶ್ರೀಹರಿ ಪಿ., ಎಂ.ಆರ್.ಪಿ.ಎಲ್. ನ ಚೀಫ್ ರೀಜನ್ ಮ್ಯಾನೇಜರ್ (ಮಾರ್ಕೆಟಿಂಗ್ ) ಸ್ವಾಮಿ ಪ್ರಸಾದ್, ಮಂಗಳೂರು ಬ್ರೈಟ್ ವೆ ಕನ್ಸಲ್ಟೆನ್ಸಿಯ ಮನಮೋಹನ್ ರೈ, ಪುತ್ತೂರು ಪುರಸಭಾ ಸದಸ್ಯರಾದ ಯಶೋಧ ಪೂಜಾರಿ, ಪುತ್ತೂರು ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ವಾಮನ ಪೈ, ಪುತ್ತೂರು ಮೌಂಟನ್ ವ್ಯೂ ಎಜುಕೇಶನಲ್ ಇನ್ಸ್ಟಿಟ್ಯೂಷನ್ ನ ಚೇರ್ಮನ್ ಕೆ.ಪಿ. ಅಹ್ಮದ್ ಹಾಜಿ, ಉದ್ಯಮಿಗಳಾದ ವಲೇರಿಯನ್ ಡಯಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

