ಉಡುಪಿ : ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆ ನಡೆದಿದೆ.
ಓರ್ವ ವ್ಯಕ್ತಿ ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ಎಳೆದೊಯ್ದಿದ್ದಾನೆ.
ವ್ಯಕ್ತಿ ಶಿರ್ವ ಪೇಟೆಯಲ್ಲಿ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ಕಟ್ಟಿಕೊಂಡು ಸುಮಾರು ದೂರ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ವ್ಯಕ್ತಿಯ ಹೀನ ಕೃತ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವ್ಯಕ್ತಿ ಯಾಕಾಗಿ ಈ ಮೂಕ ಪ್ರಾಣಿಯ ಜೊತೆ ಈ ರೀತಿ ನಡೆದುಕೊಂಡ ಎಂಬುವುದರ ಕುರಿತು ಮಾಹಿತಿ ದೊರಕಿಲ್ಲ.