ಪಾಣಾಜೆ : ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಸಂಘ ಹಾಗೂ ಕುಣಿತ ಭಜನಾ ತಂಡದ ನೇತೃತ್ವದಲ್ಲಿ ಪಾಣಾಜೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಹಿಂದೂ ಧಾರ್ಮಿಕ ಶಿಕ್ಷಣದ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಕ್ಕಳಿಗೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಕಥೆ ಮತ್ತು ಆಚಾರ ವಿಚಾರ, ಶ್ಲೋಕ ಮತ್ತು ಅದರ ಅರ್ಥ ಹೇಳಿಕೊಡುದರ ಮೂಲಕ ಮಾಹಿತಿ ನೀಡಿದರು.
ರೂಪಲೇಖ ಪಾಣಾಜೆ ಜೀವನದಲ್ಲಿ ನಮ್ಮ ಸಂಸ್ಕಾರಕ್ಕೆ ಇರುವ ಪ್ರಾಮುಖ್ಯತೆ ತಿಳಿಸಿದರು.
ಅಧ್ಯಕ್ಷತೆಯನ್ನು ಶಿವಕುಮಾರ್ ಭಟ್ ಕಾಕೆ ಕೊಚ್ಚಿ ನಿವೃತ್ತ ಮುಖ್ಯ ಗುರುಗಳು ವಹಿಸಿದರು. ಡಾ. ಅಖಿಲೇಶ್ ಅರ್ಧ ಮೂಲೆ ಉಪಾಧ್ಯಕ್ಷರು, ಸಿ ಎ. ಬ್ಯಾಂಕ್ ಪಾಣಾಜೆ, ಕುಣಿತ ಭಜನೆ ತಂಡದ ವ್ಯವಸ್ಥಾಪಕರಾದ ಗಣಪತಿ ಬಲ್ಯಾಯ ಹಾಗೂ ಗುಣಶ್ರೀ ನಿರ್ದೇಶಕರು, ಉದಯ ಸುಡುಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವೀಂದ್ರ ಭಂಡಾರಿ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.