ಬಂಟ್ವಾಳ : ಗಾಳಿ ಮಳೆಗೆ ಬಿಸಿ ರೋಡ್ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬ, ಮೊಬೈಲ್ ಟವರ್, ಬ್ಯಾನರ್ ಗಳು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತ ಗೊಂಡ ಘಟನೆ ನಡೆದಿದೆ.

ಸದ್ಯ ಮೆಸ್ಕಾಂ ಅಧಿಕಾರಿಗಳು, ಬಂಟ್ವಾಳ ಪೊಲೀಸರು , ಸಂಚಾರಿ ಪೊಲೀಸರು,ಕಂದಾಯ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.





























