ವಿಟ್ಲ : ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ವಿಜಯದಿವಸ ದಿನಾಚರಣೆಗೆ 25ವರುಷ ತುಂಬಿದ್ದು, ಕಾರ್ಗಿಲ್ ಸಮರಾಂಗಣದಲ್ಲಿ ಸೇವೆ ಸಲ್ಲಿಸಿದ ಸೈನಿಕರಾದ ಪುಣಚ ಗ್ರಾಮದ ಆಜೇರುಮಜಲು ನಿವಾಸಿ ವೆಂಕಪ್ಪ ಗೌಡರನ್ನು ಮತ್ತು ವಿಟ್ಲ ಮುಡ್ನೂರು ಗ್ರಾಮದ ಹಡೀಲು ನಿವಾಸಿ ಸೇಷಪ್ಪ ಗೌಡರನ್ನು ಬಿಜೆಪಿ ಪುಣಚ ಮಹಾಶಕ್ತೀಕೇಂದ್ರದ ವತಿಯಿಂದ ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುಣಚ ಮಹಾಶಕ್ತೀ ಕೇಂದ್ರ ಅಧ್ಯಕ್ಷರು ಹಾಗೂ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಪ್ರ.ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜ್ರೇಮಾರ್, ಭಾಜಪ ರೈತಮೋರ್ಚ ಪ್ರ.ಕಾರ್ಯದರ್ಶೀ ಹಾಗೂ ವಿ.ಮುಡ್ನೂರು ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್, ಜಿಲ್ಲಾ ಒ.ಬಿ.ಸಿ ಮೋರ್ಚ ಉಪಾಧ್ಯಕ್ಷರಾದ ಗುರುವಪ್ಪ ಪೂಜಾರಿ, ಮಹಾಶಕ್ತೀ ಕೇಂದ್ರ ಸದಸ್ಯರಾದ ಹರೀಶ್ ಪುಣಚ, ವಿ.ಮುಡ್ನೂರು ಮತ್ತು ಪುಣಚ 1 ಶಕ್ತೀಕೇಂದ್ರ ಸದಸ್ಯರುಗಳಾದ ಗೋವಿಂದರಾಜ್ ಭಟ್ ಮತ್ತು ಹರೀಶ್ ಭಟ್, ವಿ.ಮುಡ್ನೂರು ಪಂಚಾಯತು ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ನಾಯಕ್, ಪಕ್ಷದ ಸ್ಥಳೀಯ ಮುಖಂಡರಾದ ಹರೀಶ್ ಪೂಜಾರಿ, ಗಿರೀಶ್ ಹಡೀಲು, ಬೂತ್ ಕಾರ್ಯದರ್ಶಿ ದಿನೇಶ್ ನಾಯ್ಕ್, ಪ್ರೇಮಲತಾ ಸೇಷಪ್ಪ ಗೌಡ, ಜ್ಯೋತಿ ವೆಂಕಪ್ಪಗೌಡ ಉಪಸ್ಥಿತರಿದ್ದರು.






























