ಬಂಟ್ವಾಳ : ಅನಾರೋಗ್ಯದಿಂದಾಗಿ ಯುವಕನೋರ್ವ ನಿಧನ ಹೊಂದಿದ ಬಗ್ಗೆ ವರದಿಯಾಗಿದೆ.
ಕೊಡಾಜೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ, ಆಟೋರಿಕ್ಷಾ ಮೆಕಾನಿಕ್ ಹನೀಫ್ ರವರ ಪುತ್ರ ಬಾತಿಷಾ (22) ಮೃತ ಯುವಕ.
ಬಾತಿಷಾ ಜ್ವರದಿಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.