ಬೆಳ್ತಂಗಡಿ : ಬೆದರಿಕೆ ಸಾಧ್ಯತೆ ಹಿನ್ನಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ರವರಿಗೆ ರಾಜ್ಯ ಅಂಗರಕ್ಷಕ ಭದ್ರತ ಪುನರ್ ವಿಮರ್ಶನ ಸಮಿತಿಯ ಸೂಚನೆ ಮೇರೆಗೆ ತಕ್ಷಣಕ್ಕೆ ಬರುವಂತೆ ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಜು.28 ರಂದು ಜಾರಿಗೆ ಬರುವಂತೆ ಓರ್ವ ಅಂಗರಕ್ಷಕನನ್ನು ನಿಯೋಜಿಸಲಾಗಿದೆ.