ಪುತ್ತೂರು : ಭಾರೀ ಮಳೆಗೆ ಎಪಿಎಂಸಿ ರಸ್ತೆ ನದಿಯಂತಾಗಿದ್ದು, ಆದರ್ಶ ಆಸ್ಪತ್ರೆಯ ಮೆಟ್ಟಿಲುವರೆಗೆ ನೀರು ತಲುಪಿದೆ.
ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಮುಂಭಾಗ ಹಾಗೂ ಬ್ರಿಡ್ಜ್ ಸಮೀಪ ರಸ್ತೆಯಲ್ಲಿ ನೀರು ತುಂಬಿದ್ದು, ರಸ್ತೆಯೋ ಅಥವಾ ನದಿಯೋ ಎಂಬಂತಾಗಿದೆ.
ಸರಿಯಾಗಿ ರಸ್ತೆ ಕಾಣದೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಜೆವರೆಗೆ ಈ ರೀತಿ ಮಳೆ ಮುಂದುವರಿದರೆ ಆಸ್ಪತ್ರೆಯೊಳಗೂ ನೀರು ನುಗ್ಗುವ ಸಾಧ್ಯತೆಯಿದೆ.