ಬೆಳ್ತಂಗಡಿ : ನಗರದ ಕೃಷಿ ಇಲಾಖೆಗೆ ಸಂಬಂಧಿಸಿದ ಸೀಡ್ ಫಾರ್ಮ್ ರಸ್ತೆಯ ಸಮೀಪದ ಮನೆಯ ಮಹಿಳೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಜೀವಂದರ್ ಪಡಿವಾಳ ಅವರ ಪತ್ನಿ ಸುಮಾಲಿನಿ ಜೈನ್ (63) ಮೃತ ಮಹಿಳೆ.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.