ಬಂಟ್ವಾಳ : ಎರಡು ತಂಡಗಳ ನಡುವೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ಹರೀಶ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಆ.4 ಸಂಜೆ ಹರೀಶ್ ತುಂಬೆ ಜಂಕ್ಷನ್ ಗೆ ಬಂದಿದ್ದವರು ಹಿಂತಿರುಗಿ ಮನೆಗೆ ತೆರಳಲು ಜಂಕ್ಷನ್ ಬಳಿ ಮುಖ್ಯ ರಸ್ತೆಗೆ ಬಂದ ವೇಳೆ ಪರಿಚಯದ ಬಿಸಿರೋಡ್ ಅಜ್ಜಿಬೆಟ್ಟುವಿನ ಪ್ರದೀಪ್, ಪುಷ್ಪರಾಜ್ ಅಲೆತ್ತೂರು, ಶರಣ್ ಕೈಕಂಬ, ವಸಂತ ಕಾಮಾಜೆ,ರಾಕೇಶ್,ಅಶ್ವತ್ ಮತ್ತು ಇತರ 4-5 ಜನರು ಎರಡು ಕಾರುಗಳಲ್ಲಿ ಹಾಗೂ ಒಂದು ಬೈಕ್ ನಲ್ಲಿ ಬಂದು ಹರೀಶ್ ರನ್ನು ತಡೆದು, ಅವ್ಯಾಚವಾಗಿ ಬೈದಿದ್ದು, ಈ ವೇಳೆ ಆಕ್ಷೇಪಿಸಿದ ಹರೀಶ್ ಮೇಲೆ ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಬೋಬ್ಬೆ ಕೇಳಿ ಹರೀಶ್ ರವರ ಪರಿಚಯದ ಕೀರ್ತನ್, ಪೃಥ್ವಿರಾಜ್ ಮತ್ತು ವಿನೀತ್ ಅಲ್ಲಿಗೆ ಓಡಿ ಬಂದು ಹಲ್ಲೆ ನಡೆಸುತ್ತಿದ್ದುದನ್ನು ತಡೆಯಲು ಪ್ರಯತ್ನಿಸಿದ್ದು, ಈ ವೇಳೆ ಅವರಿಗೂ ಹಲ್ಲೆ ನಡೆಸಿರುತ್ತಾರೆ.
ಅಶ್ವತ್ ಎಂಬಾತ ವಿನೀತ್ ಗೆ ಚೂರಿಯಿಂದ ಇರಿದಿದ್ದು, ಶರಣ್ ಎಂಬಾತ ಪೃಥ್ವಿರಾಜ್ ಎಂಬಾತನಿಗೆ ಚೂರಿಯಿಂದ ಇರಿದಿರುತ್ತಾನೆ. ಈ ವೇಳೆ ಸಾರ್ವಜನಿಕರು ಹಾಗೂ ಪರಿಚಿತರು ಸೇರುವುದನ್ನು ಗಮನಿಸಿದ ತಂಡ ಹಲ್ಲೆ ನಡೆಸಿದ ಚೂರಿಗಳೊಂದಿಗೆ ಅವರು ಬಂದಿದ್ದ ವಾಹನಗಳಲ್ಲಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:ನಂ:136/2024 ಕಲಂ: (U/s- 189(2),191(2), 191(3),126(2), 352,115(2), 118(1), 109(1), 190,THE ಭಾರತೀಯ ನ್ಯಾಯ ಸಂಹಿತೆ (BNS) ರಂತೆ ಪ್ರಕರಣ ದಾಖಲಾಗಿರುತ್ತದೆ.


























