ಮೆಟಾ ಒಡೆತನದ ಇನ್ಸ್ಟಾಗ್ರಾಂ ಸದಾ ಒಂದಲ್ಲಾ ಒಂದು ಹೊಸ ಫೀಚರ್ಸ್ ಅನ್ನು ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ತನ್ನ ಬಳಕೆದಾರರಿಗಾಗಿ ನೂತನ ವೈಶಿಷ್ಟ್ಯವನ್ನು ಇನ್ಸ್ಟಾಗ್ರಾಂ ಬಿಡುಗಡೆ ಮಾಡಿದೆ. ಅದೇನು ಗೊತ್ತಾ?
ಇನ್ಸ್ಟಾಗ್ರಾಂನಲ್ಲಿ ಫೋಟೋ, ವೀಡಿಯೋ ಹಂಚುವ ಆಯ್ಕೆ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೀಗ ಒಂದೇ ಪೋಸ್ಟ್ನಲ್ಲಿ 20 ವಿಡಿಯೋ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ನೂತನ ಫೀಚರ್ ಬಳಕೆದಾರರ ಮನಗೆದ್ದಿದೆ.
ಇನ್ಸ್ಟಾಗ್ರಾಂನಲ್ಲಿ ಒಂದೇ ಪೋಸ್ಟ್ ಮೂಲಕ 10 ಫೋಟೋ ಮತ್ತು ವಿಡಿಯೋ ಹಂಚಬಹುದಾಗಿತ್ತು. ಆದರೀಗ ಅದರ ಮಿತಿಯನ್ನು ಏರಿಸಿದೆ. 20 ಮಿತಿಯವರೆಗೆ ಕೊಂಡೊಯ್ದಿದೆ. ಸದ್ಯ ಸದಾ ಇನ್ಸ್ಟಾಗ್ರಾಂನಲ್ಲಿ ಕಾಲ ಕಳೆಯುವವರಿಗೆ ನೂತನ ಫೀಚರ್ ಮನಗೆದ್ದಿದೆ.
ಇನ್ಸ್ಟಾ 2017ರಲ್ಲಿ ಪೋಸ್ಟ್ ಹಂಚಿಕೊಳ್ಳುವ ಮಿತಿಯನ್ನು ಹೆಚ್ಚಿಸಿಕೊಂಡಿತು. ಅಂದಿನಿಂದ ಆ್ಯಪ್ನಲ್ಲಿ ನವೀನ ಬಗೆಯ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಮಾತ್ರವಲ್ಲದೆ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಒಂದೇ ಪೋಸ್ಟ್ನಲ್ಲಿ 20 ಫೋಟೋ ಮತ್ತು ವೀಡಿಯೋ ಹಂಚಬಹುದಾಗಿದೆ.


























