ಪುತ್ತೂರು : ಹಿಂದೂ ಹಿತರಕ್ಷಣಾ ಸಮಿತಿ ಪುತ್ತೂರು ತಾಲೂಕು ವತಿಯಿಂದ ದರ್ಬೆ ವೃತ್ತದಲ್ಲಿ ‘ಮಾನವ ಸರಪಳಿ’ ನಿರ್ಮಾಣ ಮಾಡಲಾಯಿತು.

ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಲಾಯಿತು.

ಹಲವು ಪ್ರಮುಖರ ಸಹಿತ ಕಾರ್ಯಕರ್ತರು ಪೋಸ್ಟರ್ ಗಳನ್ನು ಹಿಡಿದು ಆಕ್ರೋಶ ಹೊರ ಹಾಕಿದರು.




























